ಅರಸೀಕೆರೆ: ಅತ್ತಿಗೆ ಮತ್ತು ನಾದಿನಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಸಂಭವಿಸಿದೆ.
ಅರಸೀಕೆರೆ ತಾಲ್ಲೂಕು ಗಂಗಾಮತಸ್ಥ ಸಂಘದ ಅಧ್ಯಕ್ಷರಾದ ಕೇಶವಮೂರ್ತಿ ಸಹೋದರಿ ಜಾವಗಲ್ ಗ್ರಾಮದ ಪಿಎಸಿಎಸ್ ಹಾಲಿ ನಿರ್ದೇಶಕಿ ಹಾಗೂ ಮಾಜಿ ಅಧ್ಯಕ್ಷೆ, ಗ್ರಾ.ಪಂ ಮಾಜಿ ಸದಸ್ಯೆ ವೈ.ಡಿ ಸಾವಿತ್ರಮ್ಮ (64) ತವರೂರು ಯಳವಾರೆ ಗ್ರಾಮದ ಮಗಳ ಮನೆಯಲ್ಲಿ ಭಾನುವಾರ ಮಧ್ಯಾಹ್ನ 3.30 ಗಂಟೆಗೆ ಹೃದಯಾಘಾತದಿಂದ ಮೃತಪಟ್ಟವರು.
ಮತ್ತೊಂದೆಡೆ ವೈ.ಡಿ ಸಾವಿತ್ರಮ್ಮ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಭಾನುವಾರ ರಾತ್ರಿ 12.30 ಕ್ಕೆ ಯಳವಾರೆ ಗ್ರಾಮದಿಂದ ಜಾವಗಲ್ ಗ್ರಾಮಕ್ಕೆ ತೆರಳುತ್ತಿದ್ದ ಕೇಶವಮೂರ್ತಿ ಪತ್ನಿ ನಾಗರತ್ನಮ್ಮ (67) ಮಾರ್ಗ ಮದ್ಯೆ ತೀವ್ರ ಹೃದಯಾಘಾತಕ್ಕೆ ಒಳಗಾದರು.
ಒಂದೇ ದಿನ ಅತ್ತಿಗೆ ಮತ್ತು ನಾದಿನಿ ಸಾವು ಎರಡು ಕುಟುಂಬಸ್ಥರಿಗೆ ತೀವ್ರ ಅಘಾತ ತರುವುದರ ಮೂಲಕ ಕುಟುಂಬಸ್ಥರನ್ನು ದುಃಖದ ಶೋಕದಲ್ಲಿ ಮುಳುಗಿಸಿತು.
ಮೃತ ವೈ.ಡಿ ಸಾವಿತ್ರಮ್ಮ ಓರ್ವ ಮಗ ಮತ್ತು ಮಗಳಿನೊಂದಿಗೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯು ಜಾವಗಲ್ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ 11.30 ರಲ್ಲಿ ನೆರವೇರಿತು.
ಮೃತ ನಾಗರತ್ನಮ್ಮ ಇವರು ಪತಿ, ಮೂವರು ಪುತ್ರರು ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆಯು ಯಳವಾರೆ ಗ್ರಾಮದಲ್ಲಿ ಮದ್ಯಾಹ್ನ ಗ್ರಾಮದಲ್ಲಿ ನೆರವೇರಿತು.