ಕೇಂದ್ರ ಸರ್ಕಾರದ ಕ್ಷೇತ್ರ ಪುನರ್ವಿಂಗಣೆ ಪ್ರಸ್ತಾಪದ ಹಿಂದಿನ ರಾಜಕೀಯ ಉದ್ದೇಶಗಳ ಕುರಿತು ಚರ್ಚೆ ನಡೆಸಲು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ 7 ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ.
ಮಾರ್ಚ್ 22ರಂದು ಚೆನ್ನೈನಲ್ಲಿ ನಡೆಯಲಿರುವ ರಾಜಕೀಯ ಪಕ್ಷಗಳ ಜಂಟಿ ಕ್ರಿಯಾ ಸಮಿತಿ ರಚನೆ ಕುರಿತು ಚರ್ಚಿಸಲು 7 ರಾಜ್ಯಗಳ ಮುಖಂಡರ ಸಭೆ ಕರೆಯಲಾಗಿದೆ.
ಬಂಗಾಳದ ಮಮತಾ ಬ್ಯಾನರ್ಜಿ, ಪಂಜಾಬ್ನ ಭಗವಂತ್ ಮಾನ್ ಮತ್ತು ಒಡಿಶಾದ ಮೋಹನ್ ಚಂದ್ರ ಮಾಝಿ, ಕೇರಳದ ಪಿಣರಾಯ್ ವಿಜಯನ್, ಕರ್ನಾಟಕದಿಂದ ಸಿದ್ದರಾಮಯ್ಯ, ತೆಲಂಗಾಣದ ರೇವಂತ್ ರೆಡ್ಡಿ, ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಅವರನ್ನು ಸಭೆಗೆ ಆಹ್ವಾನಿಸಲಾಗಿದೆ.
ಕ್ಷೇತ್ರ ಪುನರ್ವಿಂಗಣೆ ನಿರ್ಣಯವು ಒಕ್ಕೂಟ ವ್ಯವಸ್ಥೆಯ ಮೇಲಿನ ಸ್ಪಷ್ಟ ದಾಳಿಯಾಗಿದ್ದು, ಸಂಸತ್ತಿನಲ್ಲಿ ನಮ್ಮ ಹಕ್ಕುಸ್ವಾಮ್ಯದ ಧ್ವನಿಯನ್ನು ಕಸಿದುಕೊಳ್ಳುವ ಮೂಲಕ ಜನಸಂಖ್ಯಾ ನಿಯಂತ್ರಣವನ್ನು ಖಚಿತಪಡಿಸಿಕೊಂಡ ರಾಜ್ಯಗಳನ್ನು ಶಿಕ್ಷಿಸುತ್ತದೆ. ಈ ಪ್ರಜಾಸತ್ತಾತ್ಮಕ ಅನ್ಯಾಯವನ್ನು ನಾವು ಅನುಮತಿಸುವುದಿಲ್ಲ ಎಂದು ಎಂಕೆ ಸ್ಟಾಲಿನ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.