ಬಾಲಿವುಡ್ ನಟ ಆದಿತ್ಯ ಪಂಚೋಲಿಗೆ 2005ರಲ್ಲಿ ಪಾರ್ಕಿಂಗ್ ವೇಳೆ ನಡೆದ ಹಲ್ಲೆ ಪ್ರಕರಣದಲ್ಲಿ ನೀಡಲಾಗಿದ್ದ ಶಿಕ್ಷೆಯನ್ನು ಸೆಷನ್ಸ್ ನ್ಯಾಯಾಲಯ ಎತ್ತಿಹಿಡಿದಿದೆ. ಆದರೆ ಉತ್ತಮ ನಡವಳಿಕೆ ಹಿನ್ನೆಲೆಯಲ್ಲಿ ಶಿಕ್ಷೆಯ ಪ್ರಮಾಣದಲ್ಲಿ ಮಾರ್ಪಾಡು ಮಾಡಿದೆ.
59 ವರ್ಷದ ಆದಿತ್ಯ ಪಂಚೋಲಿಗೆ ಹಲ್ಲೆಗೆ ಒಳಗಾಗಿದ್ದ ವಿಕ್ರಮ್ ಪ್ರಾತಿಕ್ ಪಶಿನೆ ಅವರಿಗೆ 1.5 ಲಕ್ಷ ರೂ. ದಂಡ ಹಾಗೂ 1 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಇದೀಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಉತ್ತಮ ನಡವಳಿಕೆ ಆಧಾರದ ಮೇಲೆ ಆದಿತ್ಯ ಪಂಚೋಲಿಗೆ ಬಾಂಡ್ ಪಡೆದು ಒಂದು ವರ್ಷದ ಶಿಕ್ಷೆಯಿಂದ ವಿನಾಯಿತಿ ನೀಡಿದೆ.
ನ್ಯಾಯಾಲಯ ನೀಡಿದ್ದ ಒಂದು ವರ್ಷದ ಶಿಕ್ಷೆಯನ್ನು ಪ್ರಶ್ನಿಸಿ ಆದಿತ್ಯ ಪಂಚೋಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿಜಿ ಧೋಬ್ಲೆ, ಯಾವುದೇ ಅಹಿತಕರ ಘಟನೆ ಮಾಡುವುದಿಲ್ಲ ಎಂದು ಬಾಂಡ್ ಪೇಪರ್ ನಲ್ಲಿ ಬರೆಸಿಕೊಂಡು ಶಿಕ್ಷೆಯಿಂದ ವಿನಾಯಿತಿ ನೀಡಿತು. ಆದರೆ ಪರಿಹಾರ ಮೊತ್ತ ನೀಡಬೇಕು ಎಂದು ಆದೇಶಿಸಿತು.