ರಾಜ್ಯದಲ್ಲಿ ಅಪಾಯಕಾರಿ 9 ಇಂಜೆಕ್ಷನ್ ನಿಷೇಧಿಸಿದ ರಾಜ್ಯ ಸರ್ಕಾರ!

ರಾಜ್ಯದಲ್ಲಿ ಜೀವಹಾನಿ ಮಾಡಬಹುದಾದ 9 ಇಂಜೆಕ್ಷನ್ ಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಇಂಜೆಕ್ಷನ್ ಗಳ ಮಾರಾಟ ನಿಷೇಧ ಕುರಿತು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ನ್ಯೂಮೋನಿಯಾ, ಕ್ಯಾನ್ಸರ್ ಕಿಮೋ ಥೆರಪಿ, ಬ್ಯಾಕ್ಟಿರಿಯಾ ಇನ್ವೆಕ್ಷನ್, ಹೃದಯ ಸಂಬಂಧಿ ಮತ್ತು ಲೋ ಬ್ಲಡ್ ಗಳಿಗೆ ಬಳಸುವ 9 ಇಂಜೆಕ್ಷನ್ ಗಳನ್ನು ನಿಷೇಧಿಸಲಾಗಿದೆ.

ಖಾಸಗಿ ಕಂಪನಿಗಳು ಮಾರಾಟ ಮಾಡುತ್ತಿರುವ ಇಂಜೆಕ್ಷನ್ ಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಸಾಮರ್ಥ್ಯ ಸ್ಥಿರತೆ ಕಾಪಾಡಿಕೊಳ್ಳುತ್ತಿಲ್ಲ ಎಂಬುದು ಸರ್ಕಾರಿ ಲ್ಯಾಬ್ ಗಳಲ್ಲಿ ಪರಿಶೀಲಿಸಿದಾಗ ದೃಢಪಟ್ಟಿದೆ ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರಕ್ಕೆ ಅಪಾಯಕಾರಿ ಇಂಜೆಕ್ಷನ್ ಗಳ ಮಾಹಿತಿ ನೀಡಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

Post a Comment

Previous Post Next Post