ದೆಹಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಸೋಮವಾರ ಅಂತಿಮಗೊಳಿಸಲಿದ್ದು, ಫೆಬ್ರವರಿ 18ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದೆ.
ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ಹಲವು ದಿನಗಳೇ ಕಳೆದಿದ್ದು, ಬಿಜೆಪಿ ಭಾರೀ ಬಹುತಮದೊಂದಿಗೆ ಜಯ ಗಳಿಸಿದ ನಂತರವೂ ಸಿಎಂ ಸ್ಥಾನಕ್ಕೆ ಅಭ್ಯರ್ಥಿಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಈ ಕಾರಣದಿಂದ ರಾಜಧಾನಿಯ ಸಿಎಂ ಯಾರಾಗುತ್ತಾರೆ ಎಂಬ ಕುತೂಹಲ ಉಂಟಾಗಿದೆ.
ದೆಹಲಿ ಸಿಎಂ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ವರಿಷ್ಠರು ಹಲವು ದಿನಗಳಿಂದ ಸಭೆಗಳನ್ನು ನಡೆಸುತ್ತಿದ್ದು, ಸೋಮವಾರ ನಡೆಯುವ ಸಭೆಯಲ್ಲಿ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಸಾಧ್ಯತೆ ಇದೆ.
ಪರ್ವೆಶ್ ವರ್ಮಾ, ಆಶಿಶ್ ಸೂದ್ ಮತ್ತು ರೇಖಾ ಗುಪ್ತ ಸಿಎಂ ರೇಸ್ ನಲ್ಲಿರುವ ಪ್ರಮುಖರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್- ಅಮೆರಿಕ ಪ್ರವಾಸಸದಿಂದ ಮರಳಿದ ನಂತರ ಸಿಎಂ ಆಯ್ಕೆ ಅಂತಿಮಗೊಳ್ಳಲಿದೆ.