ಮಹಾಕುಂಭ ಮೇಳ ಸಂಪನ್ನ: ಮುಂದಿನ ಕುಂಭ ಮೇಳ ಯಾವಾಗ? ಎಲ್ಲಿ?

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಕಳೆದ 45 ದಿನಗಳಿಂದ ನಡೆದ ಮಹಾಕುಂಭ ಮೇಳ ೨೦೨೫ ಮಹಾಶಿವರಾತ್ರಿ ದಿನದಂದು ಸಂಪನ್ನಗೊಂಡಿದೆ. ದಾಖಲೆಯ 66 ಕೋಟಿ ಜನರು ಪುಣ್ಯಸ್ನಾನ ಮಾಡಿದ್ದಾರೆ.

ಉತ್ತರ ಪ್ರದೇಶ ಸರ್ಕಾರದ ಮಾಹಿತಿ ಪ್ರಕಾರ 66 ಕೋಟಿ ಜನರು ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಇದೀಗ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾಗಿ ತ್ರಿವೇಣಿ ಸಂಗಮ ಸೇರಿದಂತೆ ಪ್ರಯಾಗ್ ರಾಜ್ ನಲ್ಲಿ ಸ್ಚಚ್ಛತಾ ಕಾರ್ಯಗಳು ಆರಂಭವಾಗಿವೆ.

144 ವರ್ಷಗಳ ನಂತರ ನಡೆದ ಮಹಾಕುಂಭ ಮೇಳ ಸಂಪನ್ನಗೊಂಡಿದ್ದು, ಇದೀಗ ಮುಂದಿನ ಬಾರಿ ಯಾವಾಗ ಮತ್ತು ಎಲ್ಲಿ ಕುಂಭ ಮೇಳ ನಡೆಯುತ್ತದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.

2027ರಂದು ಮಹಾರಾಷ್ಟ್ರ ನಾಸಿಕ್ ನಲ್ಲಿ ಕುಂಭ ಮೇಳ ನಡೆಯಲಿದೆ. 2027 ಜುಲೈ 17ರಿಂದ  ಆಗಸ್ಟ್ 17ರವರೆಗೆ ಕುಂಭಮೇಳ ನಡೆಯಲಿದೆ. ಆದರೆ ಇದು ಪೂರ್ಣ ಕುಂಭ ಅಥವಾ ಮಹಾಕುಂಭ ಮೇಳ ಅಲ್ಲ. ಬದಲಿಗೆ ಈ ಅರ್ಧಕುಂಭ ಎಂದು ಹೆಸರಿಡಲಾಗಿದೆ.

ನಾಸಿಕ್ ನಿಂದ 38 ಕಿ.ಮೀ. ದೂರ ತ್ರೈಯಂಬಕೇಶ್ವರ್ ಎಂಬ ಜಾಗದಲ್ಲಿ ಗೋದಾವರಿ ನದಿ ತಟದಲ್ಲಿ ಕುಂಭ ಮೇಳ ನಡೆಯಲಿದೆ.

ಕುಂಭಮೇಳ ಅಂದರೆ ಋಗ್ವೇದದ ಪ್ರಕಾರ ದೇವಾನುದೇವತೆಗಳು- ರಾಕ್ಷಸರು ನಡೆಸಿದ ಸಮುದ್ರ ಮಂಥನದ ಕಲ್ಪನೆ ಆಗಿದೆ. 12 ದಿನಗಳ ಕಾಲ ನಡೆದ ಸಾಗರ ಮಂಥನವನ್ನು 12 ವರ್ಷಗಳಿಗೆ ಹೋಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಕುಂಭ ಮೇಳ ನಡೆಯುತ್ತದೆ.

ಪ್ರಯಾಗ್ ರಾಜ್, ಹರಿದ್ವಾರ್, ನಾಸಿಕ್, ಉಜ್ಜಿಯಿನಿ ನಗರಗಳು ಈ ಕುಂಭ ಮೇಳ ನಡೆಯುವ ಜಾಗಗಳಾಗಿವೆ. ಕುಂಭ ಮೇಳವನ್ನು ನಾನಾ ಹೆಸರಿನಲ್ಲಿ ಅಥವಾ ನಾನಾ ರೀತಿಯಲ್ಲಿ ಆಯೋಜಿಸಲಾಗುತ್ತದೆ. ಸಾಮಾನ್ಯವಾಗಿ ಈ ನಗರಗಳಲ್ಲಿ 3 ವರ್ಷಗಳಿಗೊಮ್ಮೆ ಕುಂಭ ಮೇಳ ನಡೆಸಲಾಗಿದೆ.

144 ವರ್ಷಗಳ ನಂತರ ಪ್ರಯಾಗ್ ರಾಜ್ ನಲ್ಲಿ ಕುಂಭ ಮೇಳ ನಡೆದಿದೆ. ಆದರೆ ಪೂರ್ಣ ಕುಂಭ ಮೇಳ 12 ವರ್ಷಗಳಿಗೊಮ್ಮೆ ನಡೆಯುತ್ತಿದ್ದು, ಈ ನಾಲ್ಕು ನಗರಗಳ ಪೈಕಿ ಒಂದರಲ್ಲಿ 12 ವರ್ಷಗೊಳಿಗೊಮ್ಮೆ ನಡೆಯುತ್ತಾ ಬಂದಿದೆ.

2017ರಲ್ಲಿ ನಡೆಯುವ ಕುಂಭ ಮೇಳ ಸಿಂಹಾಸ್ತ್ರ ಕುಂಭಮೇಳ ಆಗಿದ್ದು, ಇದು ಅರ್ಧ ಕುಂಭ ಮೇಳ ಎಂದು ಕರೆಯಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಒಂದು ತಿಂಗಳ ಕಾಲ ನಡೆಯುವ ಕುಂಭಮೇಳ ಸಿದ್ಧತೆ ಸೂಚನೆ ನೀಡಿದ್ದು, ಜನದಟ್ಟಣೆ ನಿಯಂತ್ರಿಸಲು ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಬಳಸುವಂತೆ ಸೂಚಿಸಿದ್ದಾರೆ.

Post a Comment

Previous Post Next Post