`ರಾಮಾಯಣ’ ಚಿತ್ರೀಕರಣ ಆರಂಭಿಸಿದ ಯಶ್!

ಬಾಲಿವುಡ್ ನ ಬಹು ನಿರೀಕ್ಷಿತ ರಾಮಾಯಣ ಚಿತ್ರದಲ್ಲಿ ರಾವಣ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಯಶ್ ಚಿತ್ರೀಕರಣ ಆರಂಭಿಸಿದ್ದಾರೆ.

ನಿತಿಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದಲ್ಲಿ ರಣಭೀರ್ ಕಪೂರ್ ಮತ್ತು ಸಾಯಿ ಪಲ್ಲವಿ ರಾಮ ಮತ್ತು ಸೀತೆಯ ಪಾತ್ರದಲ್ಲಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಟಾಕ್ಸಿಕ್ ಚಿತ್ರದಲ್ಲಿ ಬ್ಯೂಸಿಯಾಗಿದ್ದ ಯಶ್ ವಿದೇಶದಲ್ಲಿ ಚಿತ್ರೀಕರಣ ಮುಗಿಸಿ ಇದೀಗ ಚಿತ್ರೀಕರಣ ಆರಂಭವಾಗಿ ಕೆಲವು ತಿಂಗಳೇ ಕಳೆದಿದ್ದರೂ ಚಿತ್ರೀಕರಣದತ್ತ ತಲೆ ಕೂಡ ಹಾಕದೇ ಇದ್ದ ರಾಮಾಯಣ ಚಿತ್ರದ ಚಿತ್ರೀಕರಣದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ರಾಮಾಯಣ ಚಿತ್ರಕ್ಕೆ ಯಶ್ ಕೂಡ ನಿರ್ಮಾಪಕರಾಗಿದ್ದು, ಈಗಾಗಲೇ ಮುಂಬೈಗೆ ಆಗಮಿಸಿದ್ದು, ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಮಾಯಣ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಮೊದಲ ಭಾಗದಲ್ಲಿ ರಾವಣನ ಪಾತ್ರಧಾರಿ ಆಗಿರುವ ಯಶ್ ದೃಶ್ಯಗಳು ಕಡಿಮೆ ಇವೆ ಎಂದು ಹೇಳಲಾಗಿದೆ. ಯುದ್ಧದ ಪ್ರಮುಖ ದೃಶ್ಯಗಳನ್ನು ಮುಂಬೈನ ಅಕ್ಸಾ ಸಮುದ್ರ ತೀರದಲ್ಲಿ ಚಿತ್ರೀಕರಣ ನಡೆಸಲಿದೆ ಎಂದು ಹೇಳಲಾಗಿದೆ.

ಎರಡನೇ ಭಾಗದಲ್ಲಿ ಪ್ರಮುಖವಾಗಿ ಯುದ್ಧದ ಚಿತ್ರೀಕರಣ ನಡೆಯಲಿದ್ದು, ಹಾಲಿವುಡ್ ಸಾಹಸ ನಿರ್ದೇಶಕ ವಿಶೇಷವಾಗಿ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದು, ಭಾರೀ ದೊಡ್ಡ ಬಜೆಟ್ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾರೀ ದೊಡ್ಡ ಪ್ರಮಾಣದಲ್ಲಿ ವಿಎಫ್ ಎಕ್ಸ್ ಈ ಚಿತ್ರದಲ್ಲಿ ಇರಲಿದ್ದು, ಪ್ರಮುಖವಾಗಿ ಯುದ್ಧದ ಬಗ್ಗೆ ಗಮನ ಹರಿಸಲಾಗಿದೆ. ಯಶ್ ಭಾಗದ ಚಿತ್ರೀಕರಣದ ವೇಳೆ ರಣಭೀರ್ ಅಥವಾ ಸಾಯಿ ಪಲ್ಲವಿ ಅಗತ್ಯವಿಲ್ಲ. ಹಾಗಾಗಿ ಇಬ್ಬರು ಮುಖಾಮುಖಿ ಆಗುವ ಸಾಧ್ಯತೆ ಇಲ್ಲ ಎಂದು ತಂಡ ಹೇಳಿದೆ.

ಯಶ್ ಜೊತೆ ಕೆಲವು ಪಾತ್ರಧಾರಿಗಳು ಕಾಣಿಸಿಕೊಳ್ಳಲಿದ್ದಾರೆ. ಇದೇ ವೇಳೆ ಗೋಲ್ಡನ್ ಸಿಟಿ ಆಫ್ ಲಂಕಾ ಚಿತ್ರದ ಹೈಲೈಟ್ ಆಗಲಿದ್ದು, ಲಂಕೆ ಹಾಗೂ ರಾವಣನ ಆಸ್ಥಾನದ ಬಗ್ಗೆ ದೊಡ್ಡ ಮಟ್ಟದ ಸೆಟ್ ಹಾಕಲಾಗಿದೆ ಎಂದು ಹೇಳಲಾಗಿದೆ. ಆದರೆ ಚಿತ್ರ ತಂಡ ಯಾವುದೇ ಗುಟ್ಟು ಹೊರಬೀಳದಂತೆ ಎಚ್ಚರಿಕೆ ವಹಿಸಿದೆ.

Post a Comment

Previous Post Next Post