ಭಾರತಕ್ಕೆ ತೆರಿಗೆ ವಿನಾಯಿತಿ ಇಲ್ಲ: ಮೋದಿ ಭೇಟಿ ಬೆನ್ನಲ್ಲೇ ಅಮೆರಿಕದ ಹೊಸ ವರಸೆ

ವಾಷಿಂಗ್ಟನ್: ಪ್ರತಿ ಸುಂಕ ಹೇರುವ ತನ್ನ ನಿಲುವಿನಿಂದ ಭಾರತಕ್ಕೆ ಯಾವುದೇ ರಿಯಾಯಿತಿ ನೀಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಸ್ಪಷ್ಟಪಡಿಸಿದ್ದೇನೆ. ನನ್ನ ಬಳಿ ವಾದ ಯಾರು ಮಾಡಲು ಸಾಧ್ಯ. ಸುಂಕ ವಿಧಿಸುವ ವಿಚಾರದ ಬಗ್ಗೆ ತಮ್ಮೊಂದಿಗೆ ವಾದಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಟ್ರಂಪ್ ಒತ್ತಿ ಹೇಳಿದ್ದಾರೆ.

ಇತ್ತೀಚೆಗೆ ಫಾಕ್ಸ್ ನ್ಯೂಸ್ಗೆ ನೀಡಿದ ನೀಡಿದ ಸಂದರ್ಶನದಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಅಧ್ಯಕ್ಷ ಟ್ರಂಪ್ ಮತ್ತು ಬಿಲಿಯನೇರ್ ಎಲೋನ್ ಮಸ್ಕ್ ಅವರೊಂದಿಗೆ ಜಂಟಿ ಸಂರ್ದಶನ ನಡೆಯಿತು.

ಫೆಬ್ರವರಿ 13ರಂದು, ಶ್ವೇತಭವನದಲ್ಲಿ ಟ್ರಂಪ್ ಅವರೊಂದಿಗೆ ಪ್ರಧಾನಿ ಮೋದಿಯವರ ದ್ವಿಪಕ್ಷೀಯ ಸಭೆಯ ಕೆಲವೇ ಗಂಟೆಗಳ ಮೊದಲು, ಯುಎಸ್ ಅಧ್ಯಕ್ಷರು ಪ್ರತಿ ಸುಂಕವನ್ನು ಘೋಷಿಸಿದ್ದರು.

ಟ್ರಂಪ್ ಆಡಳಿತವು ತನ್ನೊಂದಿಗೆ ವ್ಯವಹಾರ ನಡೆಸುವ ದೇಶಗಳು ವಿಧಿಸುವ ಸುಂಕಕ್ಕೆ ಅಷ್ಟೇ ಪ್ರಮಾಣದ ಪ್ರತಿ ಸುಂಕ ವಿಧಿಸುವ ತನ್ನ ನೀತಿಯನ್ನು ಬಹಿರಂಗವಾಗಿಯೇ ಹೇಳಿಕೊಂಡಿದೆ. ನಾವು ಏನು ಮಾಡಲಿದ್ದೇವೆ ಎಂಬುದು ಸ್ಪಷ್ಟವಾಗಿದೆ. ನೀವು ಎಷ್ಟೇ ಶುಲ್ಕ ವಿಧಿಸಿದರೂ ಅಡ್ಡಿ ಇಲ್ಲ. ಆದರೆ ನಾನೂ ಅದೇ ಪ್ರಮಾಣದ ಶುಲ್ಕ ವಿಧಿಸುತ್ತೇನೆ” ಎಂದು ಮೋದಿ ಅವರಿಗೆ ಹೇಳಿದ್ದಾಗಿ ಅಧ್ಯಕ್ಷ ಟ್ರಂಪ್ ತಿಳಿಸಿದರು.

ಅವರು (ಮೋದಿ) ‘ಇಲ್ಲ, ಇಲ್ಲ, ನನಗೆ ಅದು ಇಷ್ಟವಿಲ್ಲ’ ಎಂದು ಹೇಳಿದರು. ಆದರೆ ನೀವು ಏನೇ ಶುಲ್ಕ ವಿಧಿಸಿದರೂ, ನಾನು ಪ್ರತಿಯಾಗಿ ಸುಂಕ ವಿಧಿಸುತ್ತೇನೆ ಎಂದು ಅವರಿಗೆ ಹೇಳಿದ್ದೇನೆ ಎಂಬುದಾಗಿ ಟ್ರಂಪ್ ಮಾಹಿತಿ ನೀಡಿದ್ದಾರೆ..

ಅಮೆರಿಕದಿಂದ ಕೆಲವು ಆಮದುಗಳ ಮೇಲೆ ಭಾರತವು ಗರಿಷ್ಠ ಸುಂಕವನ್ನು ಹೊಂದಿದೆ. ಆಟೋಮೊಬೈಲ್ ಕ್ಷೇತ್ರದಲ್ಲಂತೂ ಭಾರತವು ಶೇಕಡಾ ೧೦೦ ರಷ್ಟು ಶುಲ್ಕ ವಿಧಿಸುತ್ತಿದೆ.

ಅಮೆರಿಕದ ಸರಕುಗಳ ಮೇಲೆ ಭಾರತ ವಿಧಿಸುವ ಅದೇ ಮಟ್ಟದ ಸುಂಕವನ್ನು ಭಾರತೀಯ ಆಮದಿನ ಮೇಲೆ ಅಮೆರಿಕ ವಿಧಿಸಲಿದೆ. ಈ ವಿಚಾರದಲ್ಲಿ ನನ್ನೊಂದಿಗೆ ಯಾರೂ ವಾದಿಸಲು ಸಾಧ್ಯವಿಲ್ಲ ಎಂದು ಅಧ್ಯಕ್ಷ ಟ್ರಂಪ್ ಕೊಚ್ಚಿಕೊಂಡರು.

“ನಾನು ಎಷ್ಟು ಶುಲ್ಕ ವಿಧಿಸುತ್ತೇನೆ ಎಂದು ಹೇಳುವುದಿಲ್ಲ. ಆದರೆ ನೀವೆಷ್ಟು ಸುಂಕ ಹೇರುತ್ತೀರೋ ಅಷ್ಟನ್ನೇ ಪ್ರತಿಯಾಗಿ ನಾನೂ ಹೇರುತ್ತೇನೆ ಎಂದು ಭಾರತಕ್ಕೆ ಹೇಳಿದ್ದೇನೆ ಎಂದು ಟ್ರಂಪ್ ಹೇಳಿದರು.

ಮೋದಿಯವರ ಯುಎಸ್ ಭೇಟಿಯ ಸಮಯದಲ್ಲಿ, ಭಾರತದ ಮೇಲಿನ ಪ್ರತಿ ಸುಂಕದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, “ಭಾರತವು ವಿಶ್ವದಲ್ಲಿಯೇ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರವಾಗಿದೆ ಎಂದಿದ್ದರು. ಇನ್ನು ಟ್ರಂಪ್ ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಭಾರತವನ್ನು ಸುಂಕದ ರಾಜ ಎಂದು ಬಣ್ಣಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Post a Comment

Previous Post Next Post