ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರು ಬಿಟ್ಟು ಹೊರಗೆ ಎಲ್ಲೂ ಹೋಗದಂತೆ ಕಟ್ಟಿ ಹಾಕಿದ್ದ ಹೈಕೋರ್ಟ್ ಇದೀಗ ಷರತ್ತು ಸಡಿಲಗೊಳಿಸಿದೆ. ಇದರೊಂದಿಗೆ ದರ್ಶನ್ ಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.
ಸಿನಿಮಾ ಚಿತ್ರೀಕರಣ ಬಾಕಿ ಸೇರಿದಂತೆ ಹಲವು ಕಾರಣ ನೀಡಿ ದರ್ಶನ್ ದೇಶಾದ್ಯಂತ ಸಂಚರಿಸಲು ಅನುಮತಿ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಅವರ ಮನವಿಯನ್ನು ಪುರಸ್ಕರಿಸಿ ದೇಶದ ಯಾವುದೇ ಮೂಲೆಗೆ ಬೇಕಾದರೂ ಪ್ರಯಾಣಿಸಲು ಅನುಮತಿ ನೀಡಿದೆ.
ಇದಕ್ಕೂ ಮುನ್ನ ದರ್ಶನ್ ಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರು ಬಿಟ್ಟು ಹೊರಗೆ ಹೋಗದಂತೆ ಸೂಚಿಸಲಾಗಿತ್ತು. ಅಲ್ಲದೇ ಮೈಸೂರಿಗೆ ಹೋಗಲು ದರ್ಶನ್ ಅನುಮತಿ ಪಡೆದು ತೆರಳಬೇಕಿತ್ತು.
ಇದೀಗ ದರ್ಶನ್ ಗೆ ವಿದೇಶಕ್ಕೆ ತೆರಳದಂತೆ ಸೂಚನೆ ನೀಡಲಾಗಿದ್ದು, ದೇಶದಾದ್ಯಂತ ಸಂಚಾರಕ್ಕೆ ಅನುಮತಿ ನೀಡಿದೆ. ಇದರಿಂದ ದರ್ಶನ್ ಬಾಕಿ ಇರುವ ಚಿತ್ರೀಕರಣದಲ್ಲಿ ಭಾಗವಹಿಸಬಹುದಾಗಿದೆ.