ದೆಹಲಿ ಸಿಎಂ ಆಗಿ ರೇಖಾ ಗುಪ್ತಾ ಪ್ರಮಾಣವಚನ ಸ್ವೀಕಾರ!

ದೆಹಲಿ ಮುಖ್ಯಮಂತ್ರಿಯಾಗಿ ಮೊದಲ ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ಬಿಜೆಪಿ ರೇಖಾ ಗುಪ್ತಾ ರಾಮಲೀಲಾ ಮೈದಾನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ರೇಖಾ ದಾಸ್ ಜೊತೆ ೬ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ೨೭ ವರ್ಷಗಳ ನಂತರ ದೆಹಲಿಯಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೇರಿತು.

ರಾಮಲೀಲಾ ಮೈದಾನದಲ್ಲಿ ಗುರುವಾರ ಬೆಳಿಗ್ಗೆ 12.30ಕ್ಕೆ ಆರಂಭವಾದ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಾಬಾ ರಾಮ್ ದೇವ್, ಸ್ವಾಮಿ ಚಿದಾನಂದ ಅಲ್ಲದೇ ಸುಮಾರು ೫೦ಕ್ಕೂ ಹೆಚ್ಚು ಸಿನಿಮಾ ತಾರೆಯರು ಪಾಲ್ಗೊಂಡಿದ್ದರು.

ಗವರ್ನರ್ ವಿಕೆ ಸಕ್ಸೇನಾ ಪ್ರಮಾಣ ವಚನ ಬೋಧಿಸಿದರು. ಮಣಿಂದರ್ ಸಿರ್ಸಾ, ಆಶಿಶ್ ಸೂದ್, ಪಂಕಜ್ ಕುಮಾರ್ ಸಿಂಗ್, ರವಿಂದರ್ ಇಂದರ್ ಸಿಂಗ್, ಕಪಿಲ್ ಮಿಶ್ರಾ ಮತ್ತು ಪರ್ವೆಶ್ ವರ್ಮಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

Post a Comment

Previous Post Next Post