ದೆಹಲಿಗೆ ಬರಬೇಕಿದ್ದ 280 ಪ್ರಯಾಣಿಕರಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ: ರೋಮ್ ನಲ್ಲಿ ತುರ್ತು ಭೂಸ್ಪರ್ಶ

ನವದೆಹಲಿ: ನ್ಯೂಯಾರ್ಕ್‌ನ ಜಾನ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಗೆ ಹೊರಟ್ಟಿದ್ದ ಅಮೆರಿಕದ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಕಾರಣ ವಿಮಾನವನ್ನು ರೋಮ್‌ನಲ್ಲಿ ತುರ್ತು ಭೂ ಸ್ಪರ್ಶ ಮಾಡಲಾಯಿತು.

ತೀವ್ರ ತಪಾಸಣೆಯ ನಂತರ ಇದೊಂದು ಹುಸಿಕರೆ ಎಂಬುದು ದೃಢಪಟ್ಟು ವಿಮಾನ ದೆಹಲಿಗೆ ತನ್ನ ಪ್ರಯಾಣ ಮುಂದುವರಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

280 ಪ್ರಯಾಣಿಕರಿದ್ದ ಬೋಯಿಂಗ್ 787-9 ಡ್ರೀಮ್ಲೈನರ್ ವಿಮಾನ ಕ್ಯಾಸ್ಪಿಯನ್ ಸಮುದ್ರದ ಮೇಲೆ ಪಶ್ಚಿಮಕ್ಕೆ ಹೋಗುವ ಮೊದಲು ಇಟಲಿಯ ಕಡೆಗೆ ತನ್ನ ಮಾರ್ಗವನ್ನು ತಿರುಗಿಸಿತು.

ನ್ಯೂಯಾರ್ಕ್‌ನಿಂದ ಶನಿವಾರ ರಾತ್ರಿ 8.30ರ ಸಮಯದಲ್ಲಿ ಟೇಕ್ ಆಫ್ ಆದ ವಿಮಾನ ಭಾರತದ ರಾಜಧಾನಿಯತ್ತ ನಿಗದಿತ 14 ಗಂಟೆಗಳ ಪ್ರಯಾಣಕ್ಕಾಗಿ ಹೊರಟಿತು. ಆದಾಗ್ಯೂ, ಹಾರಾಟದ ಸುಮಾರು 10 ಗಂಟೆಗಳ ನಂತರ ವಿಮಾನವು ಕಪ್ಪು ಸಮುದ್ರದ ಬಳಿ ಹಠಾತ್ ಮಾರ್ಗವನ್ನು ಬದಲಾಯಿಸಿದ್ದು, ರೋಮ್ ನ ಫಿಮಿಸಿನೊ ವಿಮಾನ ನಿಲ್ದಾಣದ ಕಡೆಗೆ ಹೊರಟಿದೆ.

ಇಟಾಲಿಯನ್ ವಾಯುಪ್ರದೇಶ ಸಮೀಪಿಸಿದ ನಂತರ, ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಇಟಾಲಿಯನ್ ಯುದ್ದ ವಿಮಾನಗಳು ಬೆಂಗಾವಲು ಮಾಡಿದ್ದಾಗಿ ವರದಿಯಾಗಿದೆ.

ಸಂಜೆ 5.30ರ ಸುಮಾರಿಗೆ ರೋಮ್ ನಲ್ಲಿ ಸುರಕ್ಷಿತವಾಗಿ ಇಳಿದಿದೆ. ವಿಮಾನ ಹಾರಾಟದ ಮಧ್ಯದಲ್ಲಿ ಬಾಂಬ್ ಬೆದರಿಕೆಯನ್ನು ಸ್ವೀಕರಿಸಲಾಗಿದೆ ಎಂದು ಮೂಲಗಳು ಹೇಳಿವೆ.

Post a Comment

Previous Post Next Post