ಚಾಂಪಿಯನ್ಸ್ ಟ್ರೋಫಿ: ಪಾಕಿಸ್ತಾನದ 241 ರನ್ ಗೆ ಆಲೌಟ್

ಶಿಸ್ತಿನ ದಾಳಿ ನಡೆಸಿದ ಭಾರತೀಯ ಬೌಲರ್ ಗಳು ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 241 ರನ್ ಗೆ ಆಲೌಟ್ ಮಾಡಿದೆ.

ದುಬೈನಲ್ಲಿ ಭಾನುವಾರ ನಡೆದ ಹೈಲೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 49.4 ಓವರ್ ಗಳಲ್ಲಿ 241 ರನ್ ಗೆ ಪತನಗೊಂಡಿದೆ.

ಪಾಕಿಸ್ತಾನ ತಂಡ ಉತ್ತಮ ಆರಂಭದ ಹೊರತಾಗಿಯೂ 7 ಎಸೆತಗಳಲ್ಲಿ ಇಮಾಮ್ ಉಲ್ ಹಕ್ (10) ಮತ್ತು ಬಾಬರ್ ಅಜಮ್ (23) ಇಬ್ಬರು ಪ್ರಮುಖ ಆಟಗಾರರನ್ನು ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಯಿತು.

ಸೌದ್ ಶಕೀಲ್ ಮತ್ತು ನಾಯಕ ಮೊಹಮದ್ ರಿಜ್ವಾನ್ ಮೂರನೇ ವಿಕೆಟ್ ಗೆ 104 ರನ್ ಜೊತೆಯಾಟದಿಂದ ತಂಡವನ್ನು ಕುಸಿತದಿಂದ ಪಾರು ಮಾಡಿದ್ದೂ ಅಲ್ಲದೇ ತಂಡ ಬೃಹತ್ ಮೊತ್ತ ಕಲೆಹಾಕುವ ಸುಳಿವು ನೀಡಿದರು.

ಸೌದ್ 76 ಎಸೆತಗಳಲ್ಲಿ 5 ಬೌಂಡರಿ ಒಳಗೊಂಡ 62 ರನ್ ಬಾರಿಸಿ ಅರ್ಧಶತಕದ ಗೌರವಕ್ಕೆ ಪಾತ್ರರಾದರೆ, ನಾಯಕ ರಿಜ್ವಾನ್ 77 ಎಸೆತಗಳಲ್ಲಿ 3 ಬೌಂಡರಿ ಸಹಾಯದಿಂದ 46 ರನ್ ಗಳಿಸಿದ್ದಾಗ ಅಕ್ಸರ್ ಪಟೇಲ್ ಎಸೆತದಲ್ಲಿ ಬೌಲ್ಡ್ ಆಗಿ 4 ರನ್ ಗಳಿಂದ ಅರ್ಧಶತಕದಿಂದ ವಂಚಿತರಾದರು.

ಇವರಿಬ್ಬರ ಜೊತೆಯಾಟ ಬೇರ್ಪಡುತ್ತಿದ್ದಂತೆ ಭಾರತೀಯ ಬೌಲರ್ ಗಳು ಮತ್ತೆ ಮೇಲುಗೈ ಸಾಧಿಸಿ ಬಾಲಂಗೋಚಿಗಳು ಬಾಲ ಬಿಚ್ಚದಂತೆ ನೋಡಿಕೊಂಡರು. ಈ ಹಂತದಲ್ಲಿ ಕುಶ್ದಿಲ್ ಶಾಹ 38 ರನ್ ಬಾರಿಸಿ ತಂಡದ ಮೊತ್ತ 250ರ ಗಡಿ ಸಮೀಪ ಕೊಂಡೊಯ್ದರು.

ಸ್ಪಿನ್ನರ್ ಕುಲದೀಪ್ ಯಾದವ್ 3 ವಿಕೆಟ್ ಪಡೆದು ಮಿಂಚಿದರೆ, ಹಾರ್ದಿಕ್ ಪಾಂಡ್ಯ 2 ವಿಕೆಟ್ ಗಳಿಸಿದರು. ಹರ್ಷಿತ್ ರಾಣಾ, ಅಕ್ಸರ್ ಪಟೇಲ್ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಗಳಿಸಿದರು.

Post a Comment

Previous Post Next Post