ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಪಟ್ಟ ಅಲಂಕರಿಸಿದ ಬೆನ್ನಲ್ಲೇ ವಿಶ್ವದ ನಂ.1 ಆಟಗಾರ ಜೆನ್ನಿಕ್ ಸಿನ್ನರ್ ಗೆ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ 3 ತಿಂಗಳು ನಿಷೇಧ ಹೇರಲಾಗಿದೆ.
2024ರಲ್ಲಿ ಉದ್ದೀಪನ ಮದ್ದು ಸೇವನೆ ಪ್ರಕರಣ ಇತ್ಯರ್ಥವಾಗದೇ ನೆನೆಗುದಿಗೆ ಬಿದ್ದಿದ್ದು, ಇದೀಗ ವಿಶ್ವ ಉದ್ದೀಪನಾ ನಿಗ್ರಹ ಘಟಕ ಜೆನ್ನಕ್ ಸಿನ್ನರ್ ಅವರಿಗೆ 3 ತಿಂಗಳು ಅಂತಾರಾಷ್ಟ್ರೀಯ ಕ್ರೀಡೆಯಿಂದ ೩ ತಿಂಗಳು ನಿಷೇಧ ವಿಧಿಸಿದೆ.
ಸಿನ್ನರ್ ವಿರುದ್ಧ ಹಿಂದಿನ ಪ್ರಕರಣದಲ್ಲಿ ಯಾವುದೇ ಶಿಕ್ಷೆ ವಿಧಿಸದೇ ಬಿಡುಗಡೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕ್ರೀಡಾ ನ್ಯಾಯ ಮಂಡಳಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಕಳೆದ ವರ್ಷ ಟೂರ್ನಿಯೊಂದರ ವೇಳೆ ನಡೆದ ಪರೀಕ್ಷೆಯಲ್ಲಿ ಜೆನ್ನಿಕ್ ಸಿನ್ನರ್ ಉದ್ದೀಪನ ಮದ್ದು ಸೇವಿಸಿರುವುದು ದೃಢಪಟ್ಟಿತ್ತು. ಪ್ರಕರಣದಲ್ಲಿ ಯಾವುದೇ ಶಿಕ್ಷೆ ವಿಧಿಸದ ಕಾರಣ ವಾಡಾ ಕ್ರೀಡಾ ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಸಿತ್ತು.
ಏಪ್ರಿಲ್ 2025ರಂದು ಪ್ರಕರಣ ವಿಚಾರಣೆಗೆ ಬರಬೇಕಿತ್ತು. ಈ ಹಂತದಲ್ಲಿ ವಾಡಾ ಜೊತೆ ಸಂಧಾನ ಮಾಡಿಕೊಂಡ ಸಿನ್ನರ್ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ಮೂರು ತಿಂಗಳ ಕಾಲ ನಿಷೇಧಕ್ಕೆ ಒಳಗಾಗಲು ಒಪ್ಪಿಗೆ ಸೂಚಿಸಿದ್ದಾರೆ.